384Nombre de vues
2Évaluation

ಸಾಮಾನ್ಯವಾಗಿ ಯಾವುದೇ ಪದವಿ ಕಲಿತವರು ಒಂದು ಸರಕಾರಿ ನೌಕರಿ ಸಿಕ್ಕರೆ ಸಾಕು ಲೈಫ್ ಸೆಟಲ್, ಜೀವನ ಚೆನ್ನಾಗಿರುತ್ತೆ ಅಂತ ಯೋಚಿಸ್ತಾರೆ. ಆದರೆ ಇಲ್ಲೊಬ್ಬ ಯುವಕ ಮಾತ್ರ ಇದ್ದ ಸರಕಾರಿ ನೌಕರಿ ಬಿಟ್ಟು ಕೃಷಿ ಕಡೆ ಮುಖ ಮಾಡಿದ್ದಾನೆ. ಅಲ್ಲದೆ ಕೃಷಿಯಲ್ಲಿ ಕಲ್ಲಂಗಡಿ ಬೆಳೆದು ಕೇವಲ ಎರಡು ತಿಂಗಳಲ್ಲಿ 25 ಲಕ್ಷ ಲಾಭ ಪಡೆದಿದ್ದಾನೆ. ಹಾಗಾದರೆ ಆತ ಯಾರು ? ಅವನು ಮಾಡಿದ ಕೃಷಿ ಸಾಧನೆಯಾದ್ರೂ ಏನು ? ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್.. ಹಚ್ಚ ಹಸಿರಿನಿಂದ ತುಂಬಿಕೊಂಡಿರುವ ಭೂಮಿ....... ಹಸಿರು ಬಳ್ಳಿಯಲ್ಲಿ ಮೈತುಂಬಿಕೊಂಡು ನಿಂತಿರುವ ಕಲ್ಲಂಗಡಿ ಹಣ್ಣುಗಳು.... ಇಲ್ಲಿ ಕೆಲಸ ಮಾಡುತ್ತಿರುವ ಯುವಕ.... ಇವರ ಸಾಧನೆ ಕಂಡು ಹೊಲಕ್ಕೆ ಭೇಟಿ ನೀಡುತ್ತಿರುವ ರೈತರು..... ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ದಾದನಟ್ಟಿ ಗ್ರಾಮದಲ್ಲಿ. ಈ ಯುವಕನ ಹೆಸರು ಚಂದ್ರಕಾಂತ್ ಹಿತ್ತಲಮನಿ. Bagalkot police officer Chandrakanth Hittalmani resigns job to cultivate watermelon