1703Nombre de vues
10Évaluation

ವಿದ್ಯಾರ್ಥಿಗಳಿಗಿಲ್ಲ ಕೆಲಸ ಕೇಳುವ ಹಕ್ಕು: ಕೃಷ್ಣಭೈರೇಗೌಡರ ಧಿಮಾಕಿನ ಮಾತು ಬೆಂಗಳೂರು: ರಾಜ್ಯದಲ್ಲಿ ಕೃಷಿ ಖಾತೆ ಕೃಷ್ಣಭೈರೇಗೌಡರ ಹೆಗಲಿಗೆ ಹಾಕಿದಾಗ, ಯುವ ರೈತ ಸಮುದಾಯದಲ್ಲಿ ಒಂದು ಹೊಸ ನಿರೀಕ್ಷೆ ಹುಟ್ಟಿಸಿತ್ತು. ಎಲ್ಲರ ಮೆಚ್ಚುಗೆ ಗಳಿಸಿದ್ದ ಭೈರೇಗೌಡರ ಮಗ, ಕೃಷಿಯಲ್ಲಿ ವೈಜ್ಞಾನಿಕವಾಗಿ ಏನೋ ಮಾಡ್ತಾರೆ ಅನ್ನೋ ಭಾವನೆ. ಆದ್ರೆ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದು ವಿದ್ಯಾರ್ಥಿಗಳು ಸಚಿವರನ್ನ ಭೇಟಿ ಮಾಡಿದ್ರೆ ಅವರಿಗೆ ಆದ ಅನುಭವವೇ ಬೇರೆ. ಧಿಮಾಕಿನ ಮಾತಾಡಿ ವಿದ್ಯಾರ್ಥಿಗಳನ್ನ ಹಿಯಾಳಿಸಿ ಕಳಿಸಿದ್ರು ಅನ್ನೋ ಆರೋಪ ಕೃಷಿ ಸಚಿವರ ವಿರುದ್ಧ ವ್ಯಕ್ತವಾಗ್ತಿದೆ. ಕೃಷಿ ಸಚಿವರು ಯುವ ನಾಯಕರು. ಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡ್ತಾರೆ ಅಂತಾ ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೃಷಿ ಸಚಿವರನ್ನ ಭೇಟಿ ಮಾಡಲು ಹೋಗಿದ್ರು. ರಾಜ್ಯದಲ್ಲಿ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಖಾಲಿ ಇರುವ ಅಗ್ರಿಕಲ್ಚರ್ ಆಫೀಸರ್ ಹುದ್ದೆಗಳನ್ನ ಯಾವಾಗ ಭರ್ತಿ ಮಾಡಿಕೊಳ್ತೀರಾ ಅಂತಾ ಕೇಳೋಕೆ ಹೋದ್ರೆ ಕೃಷಿ ಸಚಿವರು, ನಿಮಗೆ ಅದನ್ನ ಕೇಳುವ ಹಕ್ಕಿಲ್ಲ ಅಂದಿದ್ದಾರೆ. ಉದ್ಯೋಗ ಕೊಡಿಸ್ತೇವೆ ಅಂತ ಭರವಸೆ ನೀಡಿದ್ವಾ?: ನಿಮಗೆ ವಿಶ್ವವಿದ್ಯಾಲಯದಲ್ಲಿ ಸೀಟ್ ಕೊಡೋವಾಗ ಉದ್ಯೋಗ ಕೊಡಿಸುತ್ತೇವೆ ಅಂತ ಭರವಸೆ ನೀಡಿರಲಿಲ್ಲ. ಯಾರಾದರೂ ನಿಮಗೆ ಕೃಷಿ ವಿಜ್ಞಾನ ವಿಷಯವನ್ನ ಓದಲು ಫೋರ್ಸ್ ಮಾಡಿದ್ರಾ? ಅಂತ ಕೃಷ್ಣಭೈರೇಗೌಡ ವಿದ್ಯಾರ್ಥಿಗಳಿಗೆ ಧಿಮಾಕಿನಿಂದ ಉತ್ತರಿಸಿದ್ದಾರೆ. ಇಷ್ಟೆಲ್ಲಾ ಮಾತನಾಡಿದ ಕೃಷ್ಣಭೈರೇಗೌಡರ ನಿಜ ಬಣ್ಣ ನೋಡಿ ವಿದ್ಯಾರ್ಥಿಗಳು ಶಾಕ್ ಆಗಿದ್ರು. ಸಚಿವರ ಎಲ್ಲಾ ಮಾತುಗಳನ್ನ ಮೊಬೈಲ್‍ನಲ್ಲಿ ರೆರ್ಕಾಡ್ ಮಾಡಲಾಗುತ್ತಿತ್ತು. ತಮ್ಮ ಮಾತು ರೆಕಾರ್ಡ್ ಆಗ್ತಿರುವುದನ್ನು ಅರಿತ ಸಚಿವರು, ಮೊಬೈಲ್ ಆಫ್ ಮಾಡಿಸಿದ ಮೇಲೆ ಮನಸೋ ಇಚ್ಛೆ ನಿಂದಿಸಿದ್ರು ಅಂತ ವಿದ್ಯಾರ್ಥಿಗಳು ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು 725ಕ್ಕೂ ಹೆಚ್ಚು ಪ್ರಾದೇಶಿಕ ಕೃಷಿ ಕೇಂದ್ರಗಳಿವೆ. ಪ್ರತಿ ಕೇಂದ್ರಗಳಲ್ಲೂ ಎರಡು ಮೂರು ಕೃಷಿ ಅಧಿಕಾರಿ ಹುದ್ದೆ ಖಾಲಿಯಿದೆ. ಕಳೆದ ಮೂರು ವರ್ಷಗಳಿಂದ ಈ ಹುದ್ದೆಗಳನ್ನ ತುಂಬದೇ, ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಚಿವರು ವೈಜ್ಞಾನಿಕ ಕೃಷಿ ಬಗ್ಗೆ ಮಾತಾಡ್ತಾರೆ. ಕೃಷಿ ಸಚಿವರ ವರ್ತನೆಗೆ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು, ರಾಜ್ಯಾದ್ಯಂತ ಬೀದಿಗಿಳಿದು ಸೋಮವಾರದಿಂದ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.